ಕರ್ನಾಟಕ ಬಂದರುಗಳು

ಕರ್ನಾಟಕ ರಾಜ್ಯ ಬಂದರಿನಡಿಯಲ್ಲಿ ಬರುವ ಸಣ್ಣ ಬಂದರುಗಳು. 

ನಮ್ಮ ಕರ್ನಾಟಕ ರಾಜ್ಯದಲ್ಲಿ ಸಮುದ್ರದಂಚಿನ ಭಾಗವೆಂದು ಪರಿಗಣಿಸಲಾಗುವ ಪ್ರದೇಶದ ವಿಸ್ತಾರ 155 ನಾಟಿಕಲ್ ಮೈಲುಗಳು. ಅರ್ಥಾತ್ 300 ಕಿಲೋ ಮೀಟರ್ ಗಳು. ಈ 155 ಮೈಲಿಗಳಲ್ಲಿ 12 ಬಂದರುಗಳಿವೆ. ಕಾರವಾರದಿಂದ ಆರಂಭವಾಗುವ ಈ ಬಂದರುಗಳು ಹಳೇ ಮಂಗಳೂರಿನಲ್ಲಿ ಮುಗಿಯುತ್ತವೆ. ಇವುಗಳಲ್ಲಿ ಕೆಲವು ದಕ್ಷಿಣಕನ್ನಡ ಜಿಲ್ಲೆಗೆ ಸೇರಿದವಾದರೆ ಉಳಿದವು ಉತ್ತರಕನ್ನಡ ಜಿಲ್ಲೆಗೆ ಸೇರುತ್ತವೆ. ಅವು ಯಾವುವೆಂದರೆ. “ಕಾರವಾರ, ಬೆಲೆಕೇರಿ, ತದ್ರಿ, ಪಾವಿನಕುರುವ, ಹೊನ್ನಾವರ, ಮಂಕಿ, ಭಟ್ಕಳ್, ಕುಂದಾಪುರ, ಹಂಗರಕಟ್ಟ, ಮಲ್ಪೆ, ಪಡುಬಿದ್ರಿ ಹಾಗೂ ಹಳೇ ಮಂಗಳೂರು.

 

 ಸಮರ್ಪಕವಾದ ನದೀ ವ್ಯವಸ್ಥೆಗಳು ಈ ಕೆಳಕಂಡಂತಿದೆ

ಪೂರ್ವಾಭಿಮುಖವಾಗಿ ಹರಿಯುವ ನದಿಗಳು ಪಶ್ಚಿಮ ವಾಹಿನಿ ವ್ಯವಸ್ಥೆಗಳು

ಕೃಷ್ಣಾ ನದಿಯ ವ್ಯವಸ್ಥೆಗಳು

ಕೃಷ್ಣಾ, ತುಂಗಭದ್ರಾ, ವೇದವತೀ, ಹಗಿರಿ, ಮಲಪ್ರಭಾ, ಘಟಪ್ರಭಾ, ದೋನಿ, ಭೀಮಾ 

ಕಾಲಿಂದೀ, ಹಟ್ಟಿಕೇರಿ, ಗಂಗವಲ್ಲಿ, ಅಘನಾಶಿನೀ, ಶರಾವತೀ, ಭಟ್ಕಳ್, ಪಂಚ, ಗಂಗೋಲಿ, ಸೀತಾ, ಸ್ವರ್ಣ, ವಾರಾಹಿ, ಉದ್ಯಾವರ, ಗುರುಪುರ, ಹಾಗೂ ನೇತ್ರಾವತೀ 

ಕಾವೇರಿ ನದೀ ವ್ಯವಸ್ಥೆಗಳು:  

ಕಾವೇರಿ, ಹೇಮಾವತೀ, ಹಾರಂಗಿ, ಕಪಿಲಾ, ಶಿಂಶಾ 

knಕನ್ನಡ